ನಮಸ್ಕಾರ,
ನನ್ನ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಕಳೆದ ಶನಿವಾರ (೯ ನವೆಂಬರ್ ೨೦೧೩), ಸಿಂಗಪುರ ಕನ್ನಡ ಸಂಘ ಆಯೋಜಿಸಿದ್ದ "ಭಾವಸುಧೆ" ಕಾರ್ಯಕ್ರಮದಲ್ಲಿ ಬಿಡುಗಡೆಯಾಯಿತು. ಖ್ಯಾತ ಸಾಹಿತಿ, ಕವಿ, ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ನನ್ನ ಪುಸ್ತಕವನ್ನು ಬಿಡುಗಡೆ ಮಾಡಿದ್ದು ನನ್ನ ಸೌಭಾಗ್ಯವೇ ಸರಿ. ತುಂಟಕವಿ ಬಿ.ಆರ್.ಲಕ್ಷ್ಮಣರಾವ್ ಮತ್ತು ಪ್ರಖ್ಯಾತ ಚುಟುಕು ಬರಹಗಾರ ಎಚ್.ದುಂಡಿರಾಜ್ ಅವರು ಇದಕ್ಕೆ ಸಾಕ್ಷಿಯಾದದ್ದು ಇನ್ನೂ ವಿಶೇಷ!
ಕಾರ್ಯಕ್ರಮದ ಒಂದು ಚಿತ್ರ ಮತ್ತು ಪುಸ್ತಕದ ಮುಖಪುಟವನ್ನು ಈ ಅಂಕಣದ ಜೊತೆ ಲಗತ್ತಿಸಿದ್ದೇನೆ. ಪುಸ್ತಕ ಸದ್ಯ "ಟೋಟಲ್ ಕನ್ನಡ" ಪುಸ್ತಕ ಮಳಿಗೆ, ಜಯನಗರ, ಬೆಂಗಳೂರು, ಇಲ್ಲಿ ಲಭ್ಯವಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತದೆ. ದಯವಿಟ್ಟು ಪುಸ್ತಕ ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿ.
ಪುಸ್ತಕ ಬಿಡುಗಡೆಯ ವರದಿಗಾಗಿ ಕೆಳಗಿನ ಕೊಂಡಿ ಕ್ಲಿಕ್ಕಿಸಿ.
ಧನ್ಯವಾದಗಳು,
ಗಿರೀಶ್ ಜಮದಗ್ನಿ
No comments:
Post a Comment