
ಚಂದ್ರನಿಂದ ನೋಡ್ದೆ ಕೆಳ್ಗೆ,
ತಿರುಗ್ತಾಯಿತ್ತು ಭೂಮಿ.
ಅಕ್ಕಪಕ್ಕದಲ್ಲಿ ತೇಲಾಡ್ತಿದ್ವು,
ಗುರು,ಶುಕ್ರ,ಶನಿ!
ಭೂಮಿ ಮೇಲೆ ಬೇಜಾರಾಯ್ತು,
ಮೇಲ್ಬಂದಿದ್ದೆ ಹಾರಿ.
ಏಣಿಯಿಂದ ಏರಿ,
ಮೋಡದೊಳ್ಗೆ ತೂರಿ!
ಸ್ವಲ್ಪ ದೂರ್‍ದಲ್ಲಿ ಉರಿದೋಗ್ತಿದ್ದ
ಕೆಂಪ್ ಕೆಂಪಾಗಿ ಸೂರ್ಯ.
ಮುತ್ತು ಕೊಟ್ಬಿಟ್ಟ್ ಬರೋಣಾಂದ್ರೆ,
ನಂಗೆಲ್ಲಿದೆ ಧೈರ್‍ಯ?
ದೇಹಕ್ಕಾಗಿ ಹುಡುಕಾಡ್ಕೊಂಡು
ಅಲೆದಾಡ್ತಿತ್ತೊಂದಾತ್ಮ
ಹತ್ತಿರ ಬಂದು ಕೇಳೇ ಬಿಡ್ತು,
ಬರ್‍ತೀಯೇನ್ಲ ತಮ್ಮಾ?
ಸ್ವಲ್ಪ ಹೊತ್ನಲ್ಲಿ, ಸಾಕಾಗ್‍ಹೋಯ್ತು
ನಂಗೆ ಚಂದ್ರವಾಸ.
ಜನಗಳಿಲ್ಲ, ದನಗಳಿಲ್ಲ
ಕೈಗೆ ಇಲ್ಲ ಕೆಲ್ಸ!
ನೀರು ಇಲ್ಲ, airಊ ಇಲ್ಲ
ದೇಹಕ್ಕಿಲ್ಲ ಭಾರ!
ಮಂತ್ರಿ ಇಲ್ಲ , ಚೇಲ ಇಲ್ಲ,
ಕೂಗೋರಿಲ್ಲ ಜೈಜೈಕಾರ!
ಲಂಚ ಇರ್ಲಿ, ಮೋಸ ಇರ್‍ಲಿ,
ಬರ್‍ಲಿ, ಏಡ್ಸ್ ಅಂತ ರೋಗ
ಎಲ್ಲೇ ಹೋದ್ರುಸಿಕ್ಕೋದಿಲ್ಲ,
ಭೂಮಿಯಂತ ಜಾಗ!
5 comments:
ha ha ha...
nice one...
tumba chenagide sir, allu bhoomiya melina raajkeeya ellavu start agute svlpa dina kayabeku aste!!!
hai sir....
nimma kavana
tumbachannagide,
nanu nimmaella lekana,kavanagalanna tappade oduttene.
ಶಿವಪ್ರಕಾಶ್ ಅವರೆ - ಧನ್ಯವಾದಗಳು!
ಮನಸು - ನೀವು ಹೇಳೋದು ನಿಜ. ಆ ದಿನಗಳು ದೂರವಿಲ್ಲ! Thanks
ಸುಪ್ರಿಯ ಅವರೆ - ಕವನಗಳನ್ನು ಓದಿ ಅನಿಸಿಕೆಗಳನ್ನು ಹೇಳುತ್ತಿರುವುದಕ್ಕೆ ಧನ್ಯವಾದಗಳು. ಹೀಗೆ ಭೇಟಿ ನೀಡುತ್ತಿರಿ ! (ಮುನ್ನೆಚ್ಚರಿಕೆ!!! - ಇನ್ನು ಹಲವು ಕಥೆ , ಕವನಗಳು ಬರುತ್ತಿವೆ :-)
ಗಿರೀಶ್ ಜಮದಗ್ನಿ
ನಿಮ್ಮ ಕಲ್ಪನೆ..
ಹಾಸ್ಯದ ವಿಡಂಬನೆ..
ತುಂಬಾ ಚೆನ್ನಾಗಿ ಮೂಡಿದೆ...!
ಅಭಿನಂದನೆಗಳು..
Post a Comment