Friday 3 April 2009

ಏಪ್ರಿಲ್‌ಗೊಂದಿಷ್ಟು ತುಂತುರು ನಗೆ ಹನಿ !

(ನನ್ನ ಬರಹ ಸಂಗ್ರಹದಿಂದ)

ಪೂರ್ವಜರು!
ಹೀಗೆ ಒಂದು ಮುಸ್ಸಂಜೆ
ನನ್ನ ನೆರೆಮನೆಯಾತನನ್ನು ಕೇಳಿದೆ,
"ನಮ್ಮ ಪೂರ್ವಜರು
ಮಂಗಗಳಾಗಿದ್ದರಂತೆ, ಹೌದೇ?"

"ನನ್ನವರ ಬಗ್ಗೆ ಗೊತ್ತಿಲ್ಲ,
ನಿಮ್ಮವರ ಬಗ್ಗೆ
ಅನುಮಾನವಿಲ್ಲ!!"
ಎನ್ನುವುದೇ ಆ ಪ್ರಾಣಿ?

---------
ನಗು..?
ನೀನೇಕೆ ನಗಲಿಲ್ಲ ಹೀಗೆ ಅಂದು...
ನಾ ನಿನ್ನ ಮೊದಲ ದಿನ ನೋಡಿದಂದು?

ನಕ್ಕಿದ್ದರೆ, ಕಾಣಬಹುದಿತ್ತಲ್ಲೆ..
ಈ ನಿನ್ನ ವಕ್ರ ಹಲ್ಲು..
ಒಂದು ಹಿಂದು, ಒಂದು ಮುಂದು..

-------
ಕಂಪನಿ
ನಾ ಸತ್ತಾಗ,
ನನ್ನೊಡನೆ ಬರುವುದಿಲ್ಲ
"ನನ್ನವರು" ಈ ಲೋಕ ಬಿಟ್ಟು,
ಚಿತೆವರೆಗೂ
ನನಗೆ ಜೊತೆ,
ನನ್ನ ಹಲ್ಲಿನ ಸೆಟ್ಟು.!!!

---------
ಗತಿ
ಯ , ರ , ಲ , ವ
ಹೇಳಿಕೊಟ್ಟವನನ್ನೇ
"ಯಾರ್‍ಲಾ ಅವ?"
ಅನ್ನುತ್ತೆ
ಯುವ ಪೀಳಿಗೆ!!

------
ವ್ಯತ್ಯಾಸ
ಹೀಗೆ ಬರೆದರೆ,
ಭಾವಗೀತೆ.
ಹೀ
ಗೆ

ರೆ

ರೆ,
ನವ್ಯ ಕವಿತೆ!!!

--------
ಕನಸು...!
ನನ್ನ ಮದುವೆಯಾಗುವ ಹುಡುಗ,
"ಕಪ್ಪ" ಗಿದ್ದರೂ ಪರವಾಗಿಲ್ಲ,
ನಾ ಮಾತನಾಡುವಾಗ,
"ತೆಪ್ಪ"ಗಿದ್ದರೆ ಸಾಕು!!!

------------------
ಸ್ಥಿತಿ?
ಹಿಂದೆ-
"ಸಿರಿಗನ್ನಡಂ - ಗೆಲ್ಗೆ"
ಈಗ -
"ಸಿರಿಗನ್ನಡಂ ?? - ಶ್....ಮೆಲ್ಲಗೆ!"

-------------------------
ಒಲ್ಲೆ!
ನನಗೆ ಬೇಡ
ಲಂಚ,
ಕುರ್ಚಿ,
ಕಪ್ಪು ಹಣ!

ಅವರಾಗೆ ಕೊಟ್ಟರೆ,
ಬೇಡ-ಎನುವುದಿಲ್ಲ,
"ಗೌರವ" ಧನ,
ಮಂತ್ರಿ ಸ್ಥಾನ,
ಆಗಾಗ
ವಿದೇಶ ಪ್ರಯಾಣ!

--------------
ಸಾಕ್ಷಿ
ನಮ್ಮ ಪ್ರೀತಿಯ ಕುರುಹಿಗೆ,
ಕಟ್ಟಿಸಬೇಕಾಗಿಲ್ಲ ತಾಜ್ ಮಹಲ್ಲು,
ಬೇಕಾದರೆ ನೋಡು ಸಾಕ್ಷಿಗೆ ,
ನಾ ಕಟ್ಟುವ ಮೊಬೈಲ್ billಉ !

-------
ವಚನ
ನಮ್ಮ ದಾಂಪತ್ಯ
ದಲ್ಲೂ ವಚನ ಸಾಹಿತ್ಯವೇ!
ನನ್ನವಳ "ಬಹು"
ವಚನಗಳೆಲ್ಲಾ ಮುಗಿದ ಮೇಲೆ,
ನನ್ನದು ಬರಿ "ಏಕ"
ವಚನ.."ಆಗಲಿ" ಎಂದು!

--------
ವರ್ಷಾಂತರ
ಅಂದು,
ಮಧು ಮಂಚದಲಿ
ಕಾಯುತ ನನಗಾಗಿ ನೀನಿದ್ದೆ.

ಇಂದು,
ನಾ ಕೋಣೆಗೆ ಬರುವ ಮೊದಲೇ
ನೀ
ನಿದ್ದೆ !

- ಗಿರೀಶ್ ಜಮದಗ್ನಿ
(girish.jamadagni@gmail.com)

7 comments:

ಮನಸು said...

sir,

ha ha ha ha tumba chennagide.. nage hanigaLu tumba istavadavu...ondakinta ondu ellavu chennagive..

dhanyavadagaLu..

SSK said...

Neevu barediruva hanigavanagalu manassige mudaa needitu.

Girish Jamadagni said...

manasu & SSK,

nimma anisikege dhanyavaadagaLu. heege bhETi neeDuttiri.

lohith said...

marvalous jokes

ಗಿರೀಶ್ ಶರ್ಮ ಏನ್. ಎಂ said...

ಸುಂದರವಾಗಿದೆ, ಚೆನ್ನಾಗಿದೆ ಹನಿಗವನಗಳು
ಇಂದ ಗಿರೀಶ್ ಶಮಱ

chandra said...

Super agide ennu hecchu hanigavana kalisi pls

chandra said...

Super agide ennu hecchu hanigavana kalisi pls