Tuesday, 11 November 2008

ದಾನವ ಮಾಡದವನೇ ದಾನವ!


ದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ. ಒಬ್ಬ ಮಾನವನಾಗಿ, ಇನ್ನೊಬ್ಬ ಮಾನವನಿಗೆ, ನಾವು ಮಾಡಬಲ್ಲಂತಹ ಕನಿಷ್ಠ ಔದಾರ್ಯತೆಯಲ್ಲಿ, ದಾನ ಪ್ರಮುಖ. ದಾನಗಳಲ್ಲಿ ಹಲವು ವಿಧ. ಧನದಾನ, ಧಾನ್ಯದಾನ, ವಿದ್ಯಾದಾನ, ಗೋಧಾನ, ಭೂದಾನ, ಕನ್ಯಾದಾನ, ರಕ್ತದಾನ, ಹೀಗೆ ಹತ್ತು ಹಲವು. ನಮ್ಮಲ್ಲಿರುವ ವಸ್ತು ಬೇರೆಯವರಿಗೆ ಉಪಯೋಗವಾಗುವಂತಿದ್ದರೆ, ಅದನ್ನು ದಾನ ಮಾಡುವ ಯೋಗ್ಯತೆ ಇದ್ದರೆ, ಅರ್ಹರಿಗೆ, ದಾನ ಮಾಡುವುದು ಉತ್ತಮ. ದಾನವೆಂಬ ಕಾರ್ಯದ ಮಹತ್ವ ಮತ್ತು, ಸಮಾಜಕ್ಕೆ ಅದು ಮಾಡುವ ಒಳಿತನ್ನು ಬಹಳ ಹಿಂದೆಯೇ ಮನಗಂಡ ನಮ್ಮ ಪೂರ್ವಜರು, ದಾನವನ್ನು ನಮ್ಮ ಪೂಜೆ, ಹಬ್ಬಗಳ ರೀತಿಗಳಲ್ಲಿ ಅಳವಡಿಸಿದ್ದಾರೆ. ಶ್ರಾಧ್ಧ ಕಾರ್ಯದಲ್ಲೂ ಕೂಡ, ದಾನವನ್ನು ಮಾಡುವ ಪರಿಪಾಠವಿದೆ. 

ದಾನ ಮಾಡುವುದರಿಂದ, ನಮಗೆ ಸಂಸಾರದ ಜಡವಸ್ತುಗಳ ಮೇಲಿನ ವ್ಯಾಮೋಹ ಕಡಿಮೆಯಾಗುವುದೆನ್ನುವುದು ನಮ್ಮ ಪೂರ್ವಿಕರ ವಿಚಾರ. ಶ್ರ್‍ಇಮಂತ ಹಾಗು ಬಡವನೆಂಬ ಸಮಾಜದ ರೋಗವನ್ನು, ವಾಸಿಗೊಳಿಸುವ ದಾನ, ಸಮಾಜವಾದ (SOCIALISM)ದ ಒಂದು ಪ್ರಾಕ್ಟಿಕಲ್ ಸಾಧನ ಕೂಡ! ಇಂದಿನ ಯುಗಕ್ಕೂ ದಾನವೆಂಬ ಪ್ರಕ್ರಿಯೆ ಬಹಳ ಪ್ರಸ್ತುತ.  

ದಾನ ಮಾಡುವುದು ಮುಖ್ಯ. ಆದರೆ, ದಾನ ಮಾಡುವುದಕ್ಕೂ ಒಂದು ನೀತಿ, ನಿಯಮವಿದೆ. "ಸೊಡಲೆಣ್ಣೆ ತೀರಿದರೆ, ಕೊಡನೆತ್ತಿ ಸುರಿವರೇ? (ಇರುವುದೆಲ್ಲಾ) ಕೊಡಬೇಡ, ಕೊಡದೆ ಇರಬೇಡ, ಧರ್ಮವನು ಬಿಡಬೇಡ" ಎಂದು ಸರ್ವಙ್ನ ಬಹಳ ಸೂಕ್ಷ್ಮವಾಗಿ ವಚನದಲ್ಲಿ ಹೇಳಿದ್ದಾನೆ. ಇದಕ್ಕೆ ಸಂಬಂಧಪಟ್ಟ ತೆನಾಲಿರಾಮನ ಒಂದು ಕಥೆ ಓದಿ (http://kathavarta.org/2008/08/02/mothers-last-wish/).

ಹಾಗೆ, ದಾನ ತೆಗೆದುಕೊಳ್ಳಲೂ ಯೋಗ್ಯತೆಬೇಕು! ಎಲ್ಲಾ ಇದ್ದವರಿಗೇ ದಾನ ಮಾಡುವುದರಲ್ಲಿ ಅರ್ಥವಿಲ್ಲ. ಧರ್ಮಗ್ರಂಥಗಳಲ್ಲಿ ದಾನದ ಬಗ್ಗೆಯೇ ನಿರ್ಧಿಷ್ಠ ವ್ಯಾಖ್ಯಾನವಿದೆ. ಬೇಸರದಿಂದ, ಭಯದಿಂದ, ಪ್ರತಿಯಾಸೆಯಿಂದ, ಹೀಯಾಳಿಸುವ ಉದ್ದೇಶದಿಂದ ಅಥವಾ ಖ್ಯಾತಿಗಳಿಸುವ ಉದ್ದೇಶದಿಂದ ದಾನ ಮಾಡಿದರೆ, ಅದು ದಾನವಲ್ಲ! ಹಾಗೇ ಬೇರೆಯವರದನ್ನು ದಾನ ಮಾಡುವ ಹಕ್ಕು ನಮಗಿಲ್ಲ!

ಜೀವಂತವಿರುವಾಗ, ಅತಿ ಸುಲಭವಾಗಿ ಮಾಡಬಹುದಾದ ದಾನ-ರಕ್ತದಾನ (http://en.wikipedia.org/wiki/Blood_donation). ದಯವಿಟ್ಟು ಮಾಡಿ. ಈಗಾಗಲೇ ಮಾಡುತ್ತಿದ್ದರೆ, ಮುಂದುವರೆಸಿ. ಉಸಿರುನಿಂತಮೇಲೂ ನಮ್ಮ ಕೆಲವು ಅಂಗಾಂಗಳು ಬೇರೆಯವರಿಗೆ ಉಪಯೋಗವಾಗಬಹುದು. ಆ ದಾನಕ್ಕೆ ಈಗಲೇ ನೊಂದಾಯಿಸಿ.

ಯಾವುದೋ, ಒಟ್ಟಿನಲ್ಲಿ ದಾನ ಮಾಡಿ. ವಾಗ್ದಾನ ಮಾಡುವುದನ್ನು ಮಾತ್ರ ಮಂತ್ರಿಮಹೋದಯರಿಗೆ, ರಾಜಕಾರಣಿಗಳಿಗೆ ಬಿಟ್ಟುಬಿಡಿ!

-ಗಿರೀಶ್ ಜಮದಗ್ನಿ

2 comments:

Tarence said...

Hello Sir,

Hope you recognise your old Tenant Tarence. Well just wanted to inform you that I do check your blog once in a while for the good photographs that you upload !!

Hope things are fine at your end. Enjoy and do write sometime on my gmail account.

Tarence

Mangesh Bhosale said...
This comment has been removed by a blog administrator.